ಖಾಲಿ ಇರುವ 4366 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್


NM INFORMATION .


ಖಾಲಿ ಇರುವ 4366 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್

    ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಖಾಲಿಯಿರುವ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು. ಒಟ್ಟು 4366 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನೆನಪಿನಲ್ಲಿಡಬೇಕಾದ ವಿಚಾರಗಳು:-
    *ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ ಆಗಸ್ಟ್ 7, 2019
    *ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 28, 2019
    *ಪೂರ್ವ ತಯಾರಿ ಪರೀಕ್ಷೆಯ ತರಬೇತಿಗಾಗಿ ಕರ ಪತ್ರಗಳ ಡೌನ್‌ಲೋಡ್: ಸೆಪ್ಟೆಂಬರ್ 2019
    *ಪೂರ್ವ ಪರೀಕ್ಷೆಯ ತರಬೇತಿಯು ಸೆಪ್ಟೆಂಬರ್ 23 ರಿಂದ 29, 2019ರ ತನಕ
    * ಆ ನ್‌ಲೈನ್ ಪರೀಕ್ಷೆಗೆ ಕರಪತ್ರಗಳ ಡೌನ್‌ಲೋಡ್ (ಪ್ರಾಥಮಿಕ): ಅಕ್ಟೋಬರ್ 2019
    * ಆನ್‌ಲೈನ್ ಪರೀಕ್ಷೆ (ಪ್ರಾಥಮಿಕ): ಅಕ್ಟೋಬರ್ 12, 13, 19 ಮತ್ತು 20, 2019

ಅಭ್ಯರ್ಥಿಗಳು ವಯಸ್ಸಿನ ಮಿತಿ:-
    *ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 0 ರಿಂದ 30 ವಯಸ್ಸಿನ ಮಿತಿಯಲ್ಲಿರಬೇಕು.

   * ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳ ವಯೋಮಿತಿಯು ಸರಕಾರದ ಮಾನದಂಡಗಳ ಪ್ರಕಾರ ಇರಲಿದೆ.

ಶೈಕ್ಷಣಿಕ ಮಾನದಂಡಗಳು:-
    ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರವು ಗುರುತಿಸಿರುವ ಸಂಸ್ಥೆಯಿಂದ ಪದವಿ ಪಡೆದಿರಬೇಕು.

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.