ಪಡಿತರ ಚೀಟಿಯ ಇ ಕೆವೈಸಿ


NM INFORMATION.
ಸಾರ್ವಜನಿಕರೇ ಆಹಾರ ಇಲಾಖೆಯ ನೂತನ ನಿರ್ದೇಶನ ದಂತೆ ಪಡಿತರ ಚೀಟಿಯ ಇ ಕೆವೈಸಿ ಮಾಡಲು ಆದೇಶಿಸಿದ್ದು. ಈ ನೂತನ ಆದೇಶದಂತೆ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ಗಡುವು ನೀಡಿದ್ದು, ಈ ದಿನಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ಆಯಾ ಬಾಗದ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಇ- ಕೆವೈಸಿ ಮಾಡಲು ಸೂಚಿಸಲಾಗಿದೆ.

ಸಾರ್ವಜನಿಕರಿಗಾಗಿ ಇ-ಕೆವೈಸಿ ಬಗ್ಗೆ ಕೆಲ ಸೂಚನೆ ಅರಿವಿರಲಿ: 
1.ಇ- ಕೆವೈಸಿ ಪದ್ದತಿಯು ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ9 ರಿಂದ ಮಧ್ಯಾಹ್ನ1 
4to 8pm ರವರೆಗೆ ಮಾತ್ರ ಸರ್ವರ್ ಲಭ್ಯವಿರುತ್ತದೆ. ಮತ್ತು ಯಾವುದೇ ಇನ್ನಿತರ ಸೆಂಟರ್ ಗಳಲ್ಲಿ ಇ-ಕೆವೈಸಿ ಲಭ್ಯವಿಲ್ಲ. 

2. ಇ-ಕೆವೈಸಿ ಮಾಡುವ ಪಡಿತರ ಚೀಟಿದಾರರೇ ಕುಟುಂಬದ ಪ್ರತಿಯೊಂದು ಸದಸ್ಯರು ಹಾಜರಾಗಬೇಕು ಹಾಗೂ ಆಧಾರ್ ಬೆರಳಚ್ಚು (ಬಯೋಮೆಟ್ರಿಕ್) ಅಪ್ಡೇಟ್ ಆಗಿರಬೇಕು, ಇಲ್ಲವಾದಲ್ಲಿ ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಸಾಧ್ಯವಿಲ್ಲ. ಈ ರೀತಿಯಾಗಿ ಕಂಡು ಬಂದರೆ ಆಧಾರ್ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಆಧಾರ್ ಅನ್ನು ಬಯೋಮೆಟ್ರಿಕ್ ಮಾಡಿ ಬಳಿಕ ಆ ಆಧಾರ್ ಅಪ್ಡೇಟ್ ಆದ ನಂತರ ಪುನಃ ನ್ಯಾಯಬೆಲೆ ಅಂಗಡಿ ಬೇಟಿ ನೀಡಿ ಇ-ಕೆವೈಸಿ (ಬಯೋಮೆಟ್ರಿಕ್ ಅಪ್ಡೇಟ್) ಮಾಡುವುದು. 

3. ಇ-ಕೆವೈಸಿಯ ಪದ್ದತಿಯು ಯಾವುದೇ ಸಾರ್ವಜನಿಕರಿಗೆ ತೊಂದರೆ ನೀಡದೆ ಸರಕಾರದ ಅನ್ವಯದಂತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ ಎಲ್ಲಿಯೂ ನೂಕುನುಗ್ಗದೆ ಆಯಾ ಬಾಗದ ನ್ಯಾಯಬೆಲೆ ಅಂಗಡಿಯಲ್ಲಿ ಬೇಟಿ ನೀಡಿದರೆ ಮಾಡಿಕೊಡಲಾಗುವುದು. 

4.ಇ- ಕೆವೈಸಿ ಮಾಡಲು ಕುಟುಂಬದ ಪಡಿತರ ಚೀಟಿ ಹಾಗೂ ಆ ಪಡಿತರ ಚೀಟಿಯಲ್ಲಿ ಹೆಸರನ್ನು ಹೊಂದಿರುವ ಕುಟುಂಬ ಸದಸ್ಯರ ಆಧಾರ್ ಮಾತ್ರ ಕೊಂಡಯ್ಯವುದು. 

5. ಇ-ಕೆವೈಸಿ ಮಾಡುವ ಸಂಧರ್ಭ ಪಡಿತರ ಚೀಟಿಯಲ್ಲಿ ಹೆಸರಿರುವ ಕೆಲ ಸದಸ್ಯರು ವಿದೇಶದಲ್ಲಿಯೋ ಅಥಾವಾ ಮರಣ ಹೊಂದಿದವರೋ ಅಂತಹ ಹೆಸರನ್ನು ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಅಸಾಧ್ಯವಾದಲ್ಲಿ ಆ ಕುಟುಂಬ ಸದಸ್ಯರ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಯಿಂದ ನೀಡಲ್ಪಡುವ ರೇಷನ್ ಇ-ಕೆವೈಸಿ ಬಳಿಕ ಖಡಿತವಾಗುವುದು. 

6. ಇ-ಕೆವೈಸಿ ಮಾಡುವ ಸಂಧರ್ಭ ನಿಮ್ಮ ಪಡಿತರ ಚೀಟಿಯಲ್ಲಿನ ಹಳೆಯ ಪೋಟೋ ಆಧಾರ್ ಕಾರ್ಡ್ ನಲ್ಲಿ ಹೊಂದಿರುವ ಪೋಟೋಗೆ ಬದಲಾಗುವುದು ಹಾಗೂ ಪಡಿತರ ಚೀಟಿಯ ಮುಖ್ಯಸ್ಥ ಪುರುಷರಾಗಿದ್ದಲ್ಲಿ ಇ-ಕೆವೈಸಿ ಮಾಡುವ ಸಂಧರ್ಭ ಪಡಿತರ ಚೀಟಿಯ ಮುಖ್ಯಸ್ಥ ಸ್ತ್ರೀಯರಿಗೆ ವರ್ಗಾಯಿಸಲಾಗುವುದು. ಸ್ತ್ರೀಯರು ಇಲ್ಲದ ಪಡಿತರ ಚೀಟಿಗೆ ಮಾತ್ರ ಪುರುಷ ಮುಖ್ಯಸ್ಥನಾಗಿರುತ್ತಾನೆ

7. ಪಡಿತರ ಚೀಟಿ ಇ-ಕೆವೈಸಿ ಸಂಧರ್ಭ ಆಧಾರ್ ನೊಂದಾಯಿತ ಮುಬೈಲ್ ನಂಬರ್ ಅಗತ್ಯ ಹಾಗೂ ಕುಟುಂಬದ ಮುಖ್ಯಸ್ಥ ಹೆಂಗಸರನ್ನು ಆಯ್ಕೆ ಮಾಡುವಾಗ ಹಿರಿಯ ವ್ಯಕ್ತಿಗೆ ಮಾತ್ರ ಆಯ್ಕೆ ಬರುವುದು.

8. ನ್ಯಾಯ ಬೆಲೆ ಅಂಗಡಿಯಲ್ಲಿ ಮಾಡುವ ಇ-ಕೆವೈಸಿ ಪದ್ದತಿಯನ್ನು ಆಹಾರ ಇಲಾಖೆವೇ ಅಪ್ಡೇಟ್ ಮಾಡಲಾಗುತ್ತದೆ ಯಾವುದೇ ಕುಟುಂಬ ಸದಸ್ಯರು ಆಹಾರ ಇಲಾಖೆಗೆ ಭೇಟಿ ನೀಡಬೇಕಾಗಿಲ್ಲ.

9. ಪಡಿತರ ಚೀಟಿ ಇ-ಕೆವೈಸಿ 5 ವರ್ಷದ ಕೆಳಗಿನ ಮಕ್ಕಳಿಗೆ ಮಾಡಲು ಅವಕಾಶವಿಲ್ಲ ಹಾಗೂ ಆಸ್ಪತ್ರೆ, ಮನೆಯಲ್ಲಿಯೇ ಇರುವ ರೋಗಿಗಳಿಗೆ ಸೂಕ್ತ ದಾಖಲೆಯೊಂದಿಗೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿದ ಕುಟುಂಬದ ಯಾವುದೇ ಸದಸ್ಯನೂ ಆಹಾರ ಇಲಾಖೆ ಬೇಟಿ ನೀಡಿ ಆಹಾರ ನೀರೀಕ್ಷಕರ ಲಾಗಿನ್ ನಲ್ಲಿ ಅಪ್ಡೇಟ್ ಮಾಡಿಸುವುದು.

10. ಪಡಿತರ ಚೀಟಿಯಲ್ಲಿ ಇ-ಕೆವೈಸಿ ಸಂಧರ್ಭ ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಒಂದು ಲಕ್ಷ ಇಪತ್ತು ಸಾವಿರ ಆದಾಯ ಮಿತಿ ಮೀರಿದರೆ ಬಿ.ಪಿ.ಲ್ ಹಾಗೂ ಅಂತ್ಯೋದಯ ಕಾರ್ಡ್ ರದ್ದುಮಾಡಲಾಗುವುದು.

11. ಪಡಿತರ ಚೀಟಿ ಇ-ಕೆವೈಸಿ SC ಮತ್ತು ST ರವರಿಗೆ ಜಾತಿ ಮತ್ತು ಆದಾಯ ಸಂಖ್ಯೆ ಇ-ಕೆವೈಸಿ ಸಂಧರ್ಭ ದಾಖಾಲಿಸಬೇಕು.

12.ಪಡಿತರ ಚೀಟಿಗೆ ಕುಟುಂಬ ಸದಸ್ಯರು ಹೆಸರು ಸೇರ್ಪಡೆ, ಡೀಲೀಟ್ ಅಥವಾ ನ್ಯಾಯ ಬೆಲೆ ಅಂಗಡಿ ಬದಲಾವಣೆ ಇದ್ದಲ್ಲಿ
NM INFORMATION AND SERVICE CENTER MOORUGOLI

ನಮ್ಮಲ್ಲಿ  ಭೇಟಿ ನೀಡಿದರೆ ತಿದ್ದುಪಡಿ ಆದಾರದ ಮೇಲೆ ಎಲ್ಲಾ ಸದಸ್ಯರನ್ನು ಇ-ಕೆವೈಸಿ ಮಾಡಿ ಪ್ರತಿಯನ್ನು ಪಡೆದು ಆಹಾರ ಇಲಾಖೆಗೆ ಭೇಟಿ ನೀಡಿ ಅಪ್ಡೇಟ್ ಮಾಡಲು ಆ ಪ್ರತಿಯನ್ನು ನೀಡುವುದು.

 ಪಡಿತರ ಚೀಟಿಯ ಇ-ಕೆವೈಸಿ ಪದ್ದತಿಯು ಹೊಸ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರಿಗೂ ಅನ್ವಯವಾಗುವುದು ನಿಮ್ಮ ಸಂಪೂರ್ಣ ಇ-ಕೆವೈಸಿ ಆಗಿದೆಯೇ-ಇಲ್ಲವೇ ತಿಳಿಯಲು ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ಮಾಹಿತಿ ತಿಳಿಯಬಹುದು.


ಪಡಿತರ ಚೀಟಿಯ ಇ-ಕೆವೈಸಿ ಪದ್ದತಿಯಿಂದ ಇನ್ನೂ ಮುಂದೆ ಪಡಿತರ ಚೀಟಿಯಲ್ಲಿ ಹೆಸರನ್ನು ಹೊಂದಿದ ಕುಟುಂಬ ಸದಸ್ಯರಿಗೆ ಮಾತ್ರ ರೇಷನ್ ನೀಡಲಾಗುವುದು ಇತರ ಹೆಸರಿನ ರೇಷನಿಂಗ್ ಇನ್ನೂ ಮುಂದೆ ದೊರೆಯುವುದಿಲ್ಲ.

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.